Follow us:-
ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ
  • By Jyothyns
  • March 8, 2023
  • No Comments

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವವು ಪ್ರತಿ ವರ್ಷವೂ ಚೈತ್ರಮಾಸದ ಶುಕ್ಲ ಪಕ್ಷದ ಪೋರ್ಣಮಿಯಂದು ಜರಗುತ್ತದೆ. ಬೆಂಗಳೂರಿನ ಧರ್ಮರಾಯನ ದೇವಸ್ಥಾನದಲ್ಲಿ ಅನೇಕ ವಿಧಿವಿಧಾನಗಳು ಕರಗದ ಪೂರ್ವಭಾವಿ ಸಿದ್ಧತೆಗಳು ನಡಯುತ್ತದೆ. ಕರಗವನ್ನು ಆದಿಶಕ್ತಿ ದ್ರೌಪದಿದೇವಿಯ ಸ್ವರೂಪವೆಂದು ಆರಾಧಿಸಲಾಗುತ್ತದೆ.

ವಿಶೇಷತೆಗಳು: ವಹ್ನಿಕುಲ ಕ್ಷತ್ರಿಯರು ಒಂದು ರಹಸ್ಯವಾದ ಒಂದು ಕುಂಡದಲ್ಲಿ ರಹಸ್ಯವಾದ ಒಂದು ಶಕ್ತಿಯನ್ನು ಆಹ್ವಾಹನೆಯನ್ನು ಮಾಡುತ್ತಾರೆ. ಈ ಶಕ್ತಿಯನ್ನೇ ನಾವು ದ್ರೌಪದಿಯ ಆದಿಶಕ್ತಿ ಎಂದು ಕರೆಯಲಾಗುತ್ತದೆ. ಪೌರಾಣಿಕ ಹಿನ್ನಲೆಯ ಪ್ರಕಾರ ಪಾಂಡವರು ವನವಾಸಕ್ಕೆ ಹೊರಡುವ ಸಂದರ್ಭದಲ್ಲಿ ದ್ರೌಪದಿಯೂ ಸಹ ಅವರೊಂದಿಗೆ ಹೊರಡುತ್ತಾಳೆ.  ದ್ರೌಪದಿಯು ನಿಧಾನಗತಿಯಲ್ಲಿ ಚಲಿಸುತ್ತಿರುತ್ತಾಳೆ, ಆದ್ದರಿಂದ ಅವಳು ಹಿಂದೆ ಉಳಿದುಬಿಡುತ್ತಾಳೆ. ಇದೆ ಸಮಯದಲ್ಲಿ ತಿಮಿರಾಸುರನೆಂಬ ಬೀಜರಕ್ತ ರಾಕ್ಷಸನಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಾಳೆ. ಬೀಜರಕ್ತ ತಿಮಿರಾಸುರನ ದೇಹದಿಂದ ಹೊರಗೆ ಬಿದ್ದ ಒಂದೊಂದು ರಕ್ತದ ಕಣದಿಂದಲೂ ಸಹ ಸಾವಿರಾರು ಮಂದಿ ರಾಕ್ಷಸರು ಹುಟ್ಟುತ್ತಾರೆ. ಇದರಿಂದ ತೊಂದರೆಗೀಡಾದ ಹಾಗು ಕೋಪಗೊಂಡಿದ್ದ ದ್ರೌಪದಿಯು ತನ್ನ ಮೂಲ ಸ್ವರೂಪವಾದ ಆದಿಶಕ್ತಿಯ ರೂಪವನ್ನು ತಾಳಿ ತಿಮಿರಾಸುರನನ್ನು ಸಂಹರಿಸಲು ಮುಂದಾಗುತ್ತಾಳೆ. ಆದರೆ ಆ ರಾಕ್ಷಸನ ರಕ್ತದ ಕಣಗಳಿಂದ ಮತ್ತೆ ಮತ್ತೆ ಅನೇಕ ಮಂದಿ ರಾಕ್ಷಸರು ಹುಟ್ಟುತಿರುತ್ತಾರೆ.ಇದರ ಹಿನ್ನಲೆಯಲ್ಲಿ ದ್ರೌಪದಿಯೂ ಸಾವಿರಾರು ಯೋಧರನ್ನ ಸೃಷ್ಟಿಸುತ್ತಾಳೆ. ಅವರನ್ನು ಕ್ಷತ್ರಿಯರೆಂದು ಅಂದಿನಿಂದ ಕರೆಯಲಾರಂಭವಾಯಿತು. ಸೃಷ್ಟಿಮಾಡಿದ ಯೋಧರು ತನ್ನ ಮಕ್ಕಳಿದ್ದಂತೆ. ಈ ಯೋಧರು ಆ ರಾಕ್ಷಸರೊಂದಿಗೆ ಯುದ್ಧವನ್ನು ಮಾಡುತ್ತಾರೆ. ನಂತರ ದ್ರೌಪದಿಯು ಉಗ್ರ ರೂಪವನ್ನು ತಾಳಿ ಆ ತಿಮಿರಾಸುರ ರಾಕ್ಷಸನನ್ನು ನುಂಗಿಬಿಡುತ್ತಾಳೆ. ನಂತರ ಶಾಂತವಾದ ಆದಿಶಕ್ತಿಯು ತನ್ನ ಮಕ್ಕಳು ಭೂಲೋಕದಲ್ಲಿ ಇರು ಎಂದು ದ್ರೌಪದಿಯನ್ನು ಬೇಡಿದಾಗ ಅವಳು ಪ್ರತಿ ವರ್ಷವೂ ಮೊದಲನೆಯ ತಿಂಗಳ ಮೊದಲ ಹುಣ್ಣಿಮೆಯಂದು ಭೂಲಕಕ್ಕೆ ಬರುವೆನೆಂದು ಮಾತುಕೊಟ್ಟು ಆಶೀರ್ವದಿಸುತ್ತ ಮತ್ತೆ ಮತ್ತೆ ನವೀಕರಿಸಬಹುದಾದ ಒಂದು ಶಕ್ತಿಯನ್ನು ಆ ಕುಂಡದಲ್ಲಿಟ್ಟು ಮೂಲ ದ್ರೌಪದಿಯ ಸ್ವರೂಪದಲ್ಲಿ ಹೊರಡುತ್ತಾಳೆ. ಆ ಕುಂಡದಲ್ಲಿಟ್ಟ ಶಕ್ತಿಯನ್ನೇ “ಕರಗ ” ಎಂದು ಕರೆಯಲಾಗುತ್ತದೆ.

ಕರಗವನ್ನು ಹೊರುವವರು ಸ್ತ್ರೀ ವೇಷವನ್ನು ಧರಿಸಿರುತ್ತಾನೆ. ಕರಗದ ವಾಹಕವನ್ನು ನಾವು ಚಲಿಸುವ ದೇವಾಲಯವೆಂದು ಕರೆಯಲಾಗುತ್ತದೆ. ಪ್ರಪಂಚದಲ್ಲೇ ಎಲ್ಲೂ ಕಾಣದ ಧರ್ಮರಾಯ ದ್ರೌಪದಿಯ ದೇವಾಲಯವನ್ನು ನಮ್ಮ ಬೆಂಗಳೂರಿನಲ್ಲಿ ಕಾಣಬಹುದು.

Assistant Professor,
Jyothy Institute of Commerce and Management

By Mrs.Chandrika V.

Assistant Professor,
Jyothy Institute of Commerce and Management