ಕನ್ನಡ ಹಬ್ಬ 2023 ರಿಂದ ಕೆಲವು ಅದ್ಭುತ ಕ್ಷಣಗಳು!
ಈ ಕಾರ್ಯಕ್ರಮಕ್ಕೆ ಡಾ.ಎಸ್.ಸತ್ಯೇಶ್ವರ್ ಪ್ರಾಂಶುಪಾಲರು ವೇದಿಕೆಯಲ್ಲಿದ್ದ ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಕನ್ನಡ ನಾಡು ನುಡಿ,ಭಾಷೆ, ಸಾಹಿತ್ಯ, ಸಂಸ್ಕೃತಿ, ಕನ್ನಡ ಕವಿಗಳ, ಶರಣರ ನುಡಿಗಳನ್ನು ನೆನಪಿಸುವ ಮೂಲಕ ಸ್ವಾಗತಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಯುತ ಧರ್ಮೇಂದ್ರ ಕುಮಾರ್ ರವರನ್ನು , ಡೊಳ್ಳು ಕುಣಿತದ ಮೂಲಕ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಲಾಯಿತು.
ಶ್ರೀಯುತ ಧರ್ಮೇಂದ್ರ ಕುಮಾರ್ ರವರು ಸಭೆಯನ್ನುದ್ದೇಶಿಸಿ ಕರ್ನಾಟಕದ ಇತಿಹಾಸ, ಮೈಸೂರು ಅರಸರ ಕೊಡುಗೆಗಳು, ಪ್ರಮುಖವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ವಿಶಾಲವಾದ ಮನೋಭಾವ, ಬೆಂಗಳೂರು ನಗರಕ್ಕೆ ಅಂದಿನ ಕಾಲದಲ್ಲಿ ವಿದ್ಯುಚ್ಛಕ್ತಿ ಮತ್ತು ಪ್ರತಿ ಮಗುವಿಗೂ ವಿದ್ಯಾಭ್ಯಾಸದ ಹಕ್ಕು ಇದರ ಬಗ್ಗೆ ಮಾಹಿತಿ ನೀಡಿದರು. ಇಡೀ ಭಾರತ ದೇಶದ ಏಕೀಕರಣದಲ್ಲಿ ಮೈಸೂರು ರಾಜರ ಪಾತ್ರದ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದರು.
ಶ್ರೀಯುತ.ಬಿ.ಎಸ್.ಲಕ್ಷ್ಮಣ್ ಪ್ರಸಾದ್, ಶೈಕ್ಷಣಿಕ ನಿರ್ದೇಶಕರು, ಮಾತನಾಡಿ ಯುವ ಪೀಳಿಗೆ ನಮ್ಮ ರಾಜ್ಯದ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಮತ್ತು ರಾಜ್ಯದ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಮಾದರಿಯಾಗಬೇಕೆಂದು ಹೇಳಿದರು
ಶ್ರೀಯುತ ರಾಜೇಶ್.ಕೆ, ಕಾರ್ಯನಿರ್ವಾಹಕ ನಿರ್ದೇಶಕರು, ಅಧ್ಯಕ್ಷೀಯ ಭಾಷಣದಲ್ಲಿ, ಕರ್ನಾಟಕ ರಾಜ್ಯದ ಬಗ್ಗೆ, ಕನ್ನಡ ನಾಡು, ನುಡಿ, ಸಾಂಸ್ಕೃತಿಕ ವೈಭವದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡು ಮುಂದಿನ ದಿನಗಳಲ್ಲಿ ಭಾಷೆ ನಾಡು ನುಡಿಗೆ ಗೌರವಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಯುತ ಎಂ.ನರಸಿಂಹನ್, ಜ್ಯೋತಿ ಸಂಸ್ಥೆಯ ಅಧ್ಯಕ್ಷರು, ಶ್ರೀಯುತ ರಾಜೇಶ್.ಕೆ, ಕಾರ್ಯನಿರ್ವಾಹಕ ನಿರ್ದೇಶಕರು, ಪ್ರೊ.ಬಿ.ಎಸ್.ಲಕ್ಷ್ಮಣ್ ಪ್ರಸಾದ್, ಶೈಕ್ಷಣಿಕ ನಿರ್ದೇಶಕರು ಮತ್ತು ಡಾ.ಎಸ್.ಸತ್ಯೇಶ್ವರ್, ಪ್ರಾಂಶುಪಾಲರು ಉಪಸ್ಥಿತರಿದ್ದರು.
Event Details
- 9:30 am - 12:00 pm
- 09 Nov, 2023
- JICM Campus